ಎಲ್ಲೋರಾ ಗುಹೆಗಳು ( ಮೂಲ ಮರಾಠಿ ಹೆಸರು ವೆರುಳ್ ) ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ನಗರದಿಂದ ೩೦ ಕಿ.ಮೀ. ದೂರದಲ್ಲಿವೆ. ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಎಲ್ಲೋರಾ ಗುಹಾಂತರ್ದೇವಾಲಯಗಳನ್ನು ೧೯೮೩ರಲ್ಲಿ ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೋ ಘೋಷಿಸಿತು. ಶಿಲೆಯಲ್ಲಿ ಕೊರೆದು ಮಾಡುವ ಶಿಲ್ಪಶಾಸ್ತ್ರದ ಭಾರತೀಯ ಶೈಲಿಯ ಮಹಾನ್ ದ್ಯೋತಕವಾಗಿರುವ ಎಲ್ಲೋರಾ ಗುಹೆಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳಿವೆ. ಜೊತೆಗೆ ಧರ್ಮಶಾಲೆಗಳು ಸಹ ಇರುವ ಈ ಸಂಕೀರ್ಣವನ್ನು ೫ ರಿಂದ ೧೦ನೆಯ ಶತಮಾನದ ಮಧ್ಯೆ ನಿರ್ಮಿಸಲಾಯಿತು. ಒಟ್ಟು ೧೨ ಬೌದ್ಧ , ೧೭ ಹಿಂದೂ ಮತ್ತು ೫ ಜಿನಾಲಯಗಳು ಒತ್ತೊತ್ತಾಗಿ ಇಲ್ಲಿ ಇದ್ದು ಇದು ಅಂದಿನ ಕಾಲದ ಧರ್ಮ ಸಹಿಷ್ಣುತೆಯ ಮಹೋನ್ನತ ಸಂಕೇತವಾಗಿದೆ. ಎಲ್ಲೋರಾದಿಂದ ೩ ಕಿ.ಮೀ. ದೂರದಲ್ಲಿ ದೇವಸರೋವರ್ ಎಂಬಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗೃಷ್ಣೇಶ್ವರ ಮಂದಿರವಿದೆ. == ಇವನ್ನೂ ನೋಡಿ == ಮಹಾರಾಷ್ಟ್ರ ಅಜಂತಾ ಗುಹೆಗಳು ವಿಶ್ವ ಪರಂಪರೆಯ ತಾಣ == ಬಾಹ್ಯ ಸಂಪರ್ಕಗಳು == ಎಲ್ಲೋರಾ ಗುಹೆಗಳ ಬಗ್ಗೆ ಒಂದು ವಿಡಿಯೋ ಚಿತ್ರ 2008-03-27 ವೇಬ್ಯಾಕ್ ಮೆಷಿನ್ ನಲ್ಲಿ. ಯುನೆಸ್ಕೋ ಪಟ್ಟಿಯಲ್ಲಿ ಎಲ್ಲೋರಾ ಗುಹೆಗಳು ಎಲ್ಲೋರಾ ಗುಹೆಗಳ ಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆ 2007-12-10 ವೇಬ್ಯಾಕ್ ಮೆಷಿನ್ ನಲ್ಲಿ. ಎಲ್ಲೋರಾ ಮತ್ತು ಇತರ ಗುಹಾಂತರ್ದೇವಾಲಯಗಳ ಚಿತ್ರಗಳು ಗುಹೆಗಳ ಚಿತ್ರಗಳು